ರೀಸಸ್ ಮಂಗವು ಪ್ರೈಮೇಟ್ ಗಣ, ಸರ್ಕೊಪಿತಿಸಿಡೀ ಕುಟುಂಬ, ಸರ್ಕೊಪಿತಿಸಿನೀ ಉಪಕುಟುಂಬ, ಮಕಾಕ ಜಾತಿಯ ನಾಲ್ಕು ಪ್ರಭೇದಗಳ ಪೈಕಿ ಒಂದು ಮಂಗ. ದ್ವಿನಾಮ ಪದ್ಧತಿ ಹೆಸರು: ಮಕಾಕ ಮುಲೇಟ. ದಕ್ಷಿಣ ಮತ್ತು ಆಗ್ನೇಯ ಏಷ್ಯವಾಸಿ. ಭಾರತ ಉಪಖಂಡದ ಉತ್ತರ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿವೆ. == ಲಕ್ಷಣಗಳು == ಹಳದಿ ಮಿಶ್ರಿತ ಅಥವಾ ಮರಳಿನ ಬಣ್ಣ; 47-64 ಸೆಮೀ ಉದ್ದದ ಬಲಿಷ್ಠ ದೇಹ; 20-30 ಸೆಂಮೀ ಉದ್ದದ ಬಾಲ; 4.5-11 ಕಿ.ಗ್ರಾಮ್ ತೂಕ; ಕಿತ್ತಳೆ-ಕೆಂಪು ಬಣ್ಣದ ಕೂದಲು ಇರುವ ಪೃಷ್ಠ ಹಾಗೂ ಒಳತೊಡೆ; ಹಣೆಯಿಂದ ಹಿಮ್ಮುಖವಾಗಿ ಬೆಳೆದಿರುವ ಬೈತಲೆರಹಿತ ತಲೆಗೂದಲು - ಇವು ವಯಸ್ಕ ರ‍್ಹೀಸಸ್ ಮಂಗದ ವಿಶಿಷ್ಟ ಲಕ್ಷಣಗಳು. == ನಡವಳಿಕೆ == === ಸಾಮಾಜಿಕ ಸ್ವಭಾವ === ಬಲಿಷ್ಠ ಗಂಡು ಮಂಗದ ನಾಯಕತ್ವದಲ್ಲಿ 8-180 ಸದಸ್ಯರಿರುವ ಗುಂಪುಗಳಲ್ಲಿ ವಾಸ. ಅಲೆಮಾರೀ ಪ್ರವೃತ್ತಿ. === ಸಂತಾನೋತ್ಪತ್ತಿ === ಅಕ್ಟೋಬರ್-ಡಿಸೆಂಬರ್ ಗಂಡುಹೆಣ್ಣುಗಳು ಕೂಡುವ ಕಾಲ. === ಆಹಾರ === ಹಣ್ಣು, ಬೀಜ, ಬೇರು, ಮೂಲಿಕೆ ಮತ್ತು ಚಿಕ್ಕ ಕೀಟಗಳು. == ಧಾರ್ಮಿಕ ಮಹತ್ತ್ವ == ಹಿಂದು ಮತ್ತು ಬೌದ್ಧರಿಗೆ ಇದು ಪವಿತ್ರ ಪ್ರಾಣಿ. ಎಂದೇ, ಭಾರತದಲ್ಲಿ ಮಾನವ ಆವಾಸ ಮತ್ತು ದೇವಾಲಯಗಳ ಆಸುಪಾಸಿನಲ್ಲಿ ಇವು ನೆಲಸಿವೆ. == ವೈದ್ಯಕೀಯ ಮಹತ್ವ == ದೈಹಿಕ ಪ್ರಕ್ರಿಯೆಗಳಲ್ಲಿ ಮಾನವನನ್ನು ಹೋಲುವುದರಿಂದ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಅಧ್ಯಯನಗಳಲ್ಲಿ ಪ್ರಯೋಗಪಶುವಾಗಿ ವ್ಯಾಪಕ ಬಳಕೆ. ಮಾನವನ ಕೆಂಪು ರಕ್ತಕಣಗಳ ಮೇಲ್ಮೈಯಲ್ಲಿರುವ ರ‍್ಹೀಸಸ್ ಅಂಶ ಎಂಬ ಪ್ರತಿಜನಕಗಳು (ಆಂಟಿಜೆನ್) ರ‍್ಹೀಸಸ್ ಮಂಗಗಳ ರಕ್ತದಲ್ಲಿ ಮೊದಲು ಪತ್ತೆಯಾಯಿತು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == : : ' : 2019-01-18 ವೇಬ್ಯಾಕ್ ಮೆಷಿನ್ ನಲ್ಲಿ. () . ಟೆಂಪ್ಲೇಟು: